ಕಾಯ್ಜೀನಿ

 ಸಣ್ಣಗೆ ದುಂಡಾಗಿರುವ ಏಕಾಣುಜೀವಿಗಳ ಒಂದು ವರ್ಗದ್ದು (ಕಾಕಸ್). ಸಣ್ಣಗೆ ದುಂಡನೆಯ ಹೀಚುಗಾಯಿಗಳನ್ನು ಬಿಡುವ ಗಿಡಗಳ ವರ್ಗಕ್ಕೆ ಕೆಲ ಕಾಲದಿಂದಲೂ ಸಸ್ಯಶಾಸ್ತ್ರದಲ್ಲಿ ಕಾಕಸ್ (ಕಾಯಿಗಿಡ) ಎಂದು ಹೆಸರಿತ್ತು. ವಿಯನ್ನದ ಶಸ್ತ್ರವೈದ್ಯನಾಗಿದ್ದ ತಿಯೋಡೋರ್ ಬಿಲ್ರಾತ್ (1847) ದುಂಡಗೆ ಹೀಚುಗಾಯಿಯಂತೆ ಇರುವ ಏಕಾಣುಜೀವಿಗೂ ಇದೇ ಹೆಸರಿತ್ತ. ರೋಗಶಾಸ್ತ್ರದಲ್ಲಿ ಈಗ ಹಲತೆರನ ಕಾಯ್ಜೀವಿಗಳಿವೆ. ಸೂಕ್ಷ್ಮ ಕಾಯ್ಜೀವಿ (ಮೈಕ್ರೊಕಾಕಸ್), ಸರ ಕಾಯ್ಜೀವಿ (ಸ್ಟ್ರೆಪ್ಟೊಕಾಕಸ್), ಗುತ್ತಿಕಾಯ್ಜೀವಿ (ಸ್ಟೆಫಿಲೊಕಾಕಸ್), ರೇತು ಕಾಯ್ಜೀವಿ (ಗೊನೊಕಾಕಸ್), ಮಿದುಳು ಪೊರೆಕಾಯ್ಜೀವಿ (ಮೆನಿಂಗೊಕಾಕಸ್), ಪುಪ್ಪುಸಕಾಯ್ಜೀವಿ (ನ್ಯೂಮೊಕಾಕಸ್), ಇತ್ಯಾದಿ. (ನೋಡಿ- ಏಕಾಣುಜೀವಿಶಾಸ್ತ್ರ)

 

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ